ಇನ್ನು ಸಮಾದ್ಥಿಯೋಗವೆಂತೆಂದೊಡೆ : ಸುಖದುಃಖ ಪುಣ್ಯಪಾಪ ಪೂಜಾಪೂಜಂಗಳು ಸಂಕಲ್ಪವಿಕಲ್ಪಂಗಳೇನೂ ತೋರದೆ ತಾನೆಂಬ ಅಹಂಭಾವವಳಿದು ಅಖಂಡಪರಿಪೂರ್ಣಮಾದ ಪರಬ್ರಹ್ಮದಲ್ಲಿ ಕೂಡಿದ ಸಮರಸಭಾವವೇ ಸಮಾದ್ಥಿಯಯ್ಯಾ ಅಖಂಡೇಶ್ವರಾ.