ಇಪ್ಪತ್ತೈದು ತಲೆಯೊಳಗೆ ಏಳು ಮೊಲೆ ಮುಖವೆಂಟು ºದಿನಾಲ್ಕು ಬಾಯಿ ನೂರಿಪ್ಪತ್ತು ಕೋರೆದಾಡೆ. ಹೃದಯದಲ್ಲಿ ಹುದುಗಿದ ಅಗ್ನಿಯ ತೆಗೆದು ಮುದ್ದಾಡಿಸಿ (ಸೆ ?) ದನಿಯ ಧರ್ಮವ ನುಂಗಿ ಮನದ ಬಣ್ಣಗಳಡಗಿ ಹೆತ್ತ ತಾಯಿ ಮಗನ ನುಂಗಿ ಶಿಶು ತಾಯ ಬೆಸಲಾಗಿ ಗುಹೇಶ್ವರನೆಂಬ ನಿಲವ ಅಂಗಯ್ಯ ಮೊಲೆ ನುಂಗಿತ್ತು.