ಇಲ್ಲದ ಮಾಯೆಯನುಂಟುಮಾಡಿಕೊಂಡು ಬಲ್ಲತನಕ್ಕೆ ಬಾಯ ಬಿಡಲೇತಕೊ ? ಇಲ್ಲದ ಮಾಯೆಯ ಇಲ್ಲೆನಲರಿಯದೆ ತಲ್ಲಣಿಸಿ ಬಾಯ ಬಿಡಲೇತಕೊ ? ಎಲ್ಲವ ತನ್ನ ತಾ ತಿಳಿದು ನೋಡಿದಡೆ ಕೂಡಲಚೆನ್ನಸಂಗಯ್ಯ ತಾನೆ ಬೇರಿಲ್ಲ.