ಇಹಲೋಕದಲ್ಲಿ ಲಿಂಗವ ಪೂಜಿಸಿ ಪರಲೋಕದ ಪದವಿಯ ಬಯಸುವನಲ್ಲ ನೋಡಾ. ಇಹಪರವನೊಳಕೊಂಡ ಪರಿಪೂರ್ಣಲಿಂಗವು ತನ್ನ ಸರ್ವಾಂಗದಲ್ಲಿ ಸನ್ನಿಹಿತವಾಗಿರಲು ಆ ಲಿಂಗದಲ್ಲಿ ತನ್ನಂಗವ ಬೆರಸಿ ಆ ಶುದ್ಧ ಪರಮಾತ್ಮಲಿಂಗವೇ ಗೂಡಾಗಿಪ್ಪ ಲಿಂಗನಿಷ*ನ ನೋಡಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.