ಈಶ್ವರನ ದ್ರೋಣವ ಮಾಡಿ ಪದ್ಮನಾಭನ ನಾರಿಯ ಮಾಡಿ ಕಮಲಜನೆಂಬ ಬಾಣವ ತೊಟ್ಟು ತ್ರಿಭುವನವನೆಚ್ಚವರಾರೊ ? ಚಂದ್ರಸೂರ್ಯರ ಬೆನ್ನ ಮೆಟ್ಟಿ ಸುವರ್ಣದ ಮಳೆಯ ಕರಸಿದವರಾರೊ ? ದೇವದಾನವ ಮಾನವರೆಲ್ಲ ಈ ಬಾಣಕ್ಕೆ ಗುರಿಯಾಗಿ ಬಿದ್ದರು. ಗುಹೇಶ್ವರ ಶೂನ್ಯ ನಿಶ್ಶೂನ್ಯದೊಳಗೆ !