Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಈ ಲೋಕದಲ್ಲಿ ಸತ್ಕಿ ್ರೀಯನೆ ಪ್ರತಿಷೆ*ಯ ಮಾಡುತ್ತಿಪ್ಪರು. ಗೋವಿನ ದೇಹದಲ್ಲಿ ಘೃತವಿಪ್ಪುದು. ಆ ಗೋವಿಂಗೆ ಪುಷ್ಟಿಯಾಗಲರಿಯದು. ಆ ಗೋವ ಬೋಧಿಸಿ ಹಾಲ ಕರೆದು ಕಾಸಿ ಹೆಪ್ಪನಿಕ್ಕಿ ಆ ದಧಿಯ ಮಥನವ ಮಾಡಿ ಬೆಣ್ಣೆಯ ತೆಗೆದು ಆ ನವನೀತದೆ ತುಪ್ಪವ ಕಾಸಿ ಆ ಗೋವಿಂಗೆ ಕುಡಿಸಲಾಗಿ ದಿನದಿನಕ್ಕೆ ಪುಷ್ಟಿಯಪ್ಪುದು ತಪ್ಪದಯ್ಯ. ಈ ಪ್ರಕಾರದಲ್ಲಿ ಲಿಂಗೋಪಚಾರವ ಮಾಡಲಾಗಿ ಜ್ಞಾನವಹುದು. ಜ್ಞಾನವಾಗಲಿಕ್ಕೆ ಸಮ್ಯಜ್ಞಾನವಹುದು. ಸಮ್ಯಜ್ಞಾನವಾಗಲಾಗಿ ಪ್ರಾಣವೆ ಲಿಂಗವಪ್ಪುದು ತಪ್ಪದು. ಸಂದೇಹವಿಲ್ಲವಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.