ಉಟ್ಟುದನಳಿದು ಬತ್ತಲೆಯಿದ್ದಡೇನು ? ಆಶನವರತು ವ್ಯಸನ ನಿಂದು ವ್ಯಾಪ್ತಿಗಳು ತಲ್ಲೀಯವಾಗಿದ್ದಡೇನು ? ಮುಟ್ಟಬಾರದಠಾವ ಮರೆಗೊಂಡಿಪ್ಪನು ಕೂಡಲಚೆನ್ನಸಂಗಮದೇವನು.