Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಉದಯದ ಪೂಜೆ ಉತ್ಪತ್ತಿಗೆ ಬೀಜ. ಮಧ್ಯಾಹ್ನದ ಪೂಜೆ ಸ್ಥಿತಿಗತಿಯ ಸಂಸಾರಕ್ಕೆ ಬೀಜ. ಅಸ್ತಮಯದ ಪೂಜೆ ಪ್ರಳಯಕ್ಕೆ ಬೀಜ. ಈ ಉದಯ ಮಧ್ಯಾಹ್ನ ಅಸ್ತಮಯದ ಪೂಜೆ ಕಳೆದು ಸದಾ ಸನ್ನಹಿತವಾಗಿ ಮಾಡುವ ಪೂಜೆ ಉತ್ಪತ್ತಿ ಸ್ಥಿತಿ ಲಯಂಗಳ ಮೀರಿದ ನಿತ್ಯ ನಿರ್ಮಲ ಪೂಜೆ ಕಾಣಾ. ಆ ಪೂಜೆ ನಿಮ್ಮಲ್ಲಿ ಅಡಗಿತ್ತು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.