ಉದಯ ಮುಖದ ಜ್ಯೋತಿಯಿಂ ಅಧೋಮುಖಕಮಲ ಊಧ್ರ್ವಮುಖವಾಗಿ ಷಡುಕಮಲಾಂಬುಜಂಗಳು ಉದಯವಾಗಿ ಆರುಕಮಲದ ಎಸಳು ಅರುವತ್ತಾಗಿ ಎಸೆವುತಿದಾವೆ ನೋಡಾ. ಅಂಬುಜಕಮಲ ಆರರಿಂದ ಸ್ವಯಂಭುವ ಪೂಜಿಸುತಿರ್ದೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.