ಉಪಚಾರದ ಗುರುವಿಂಗೆ ಉಪಚಾರದ ಶಿಷ್ಯನು ಉಪಚಾರದ ಲಿಂಗ ಉಪಚಾರದ ಜಂಗಮವು ಉಪಚಾರದ ಪ್ರಸಾದವ ಕೊಂಡು ಗುರುವಿಂಗೆ ಭವದ ಲೆಂಕನಾಗೆ ಅಂಧನ ಕೈಯ ಅಂಧಕ ಹಿಡಿದಂತೆ_ ಇಬ್ಬರೂ ಹೊಲಬುಗೆಟ್ಟರು ಕಾಣಾ ಗುಹೇಶ್ವರಾ.