ಉಭಯಲಿಂಗಪ್ರಸಾದವನರಿಯದೆ ಉಭಯ ಅಂತದೊಳಗಾಯಿತಲ್ಲಾ ! ಉಭಯ ನಾಮದ ಮೇಲೆ ನಾಮವಾದುದನು ದೇಹಪೂಜಕಂಗರಿಯಬಾರದು. ದೇಹ ಉಭಯವಾದುದನು ಉಭಯ ತ್ರಿವಿಧವಾದುದನು ಕೂಡಲಚೆನ್ನಸಂಗಯ್ಯಾ ನಿಮ್ಮ ಪ್ರಸಾದಿಗಲ್ಲದರಿಯಬಾರದು.