ಉರಿಯ ಗಗನದೊಳಗೆ ಶರೀರವಿಲ್ಲದ ತರುಣಿ ಉದಯವಾಗಿ ಉರಿಯ ಮಣಿಯ ಪವಣಿಗೆಯ ಮಾಡುವುದ ಕಂಡೆನಯ್ಯಾ. ಉರಿಯನುಂಡು ಶರೀರವಿಲ್ಲದಾಕೆಯ ನೆರೆದು ಪರಮಾಮೃತವ ಸೇವಿಸಿ ಪರಮ ಪರಿಣಾಮದೊಳಗೋಲಾಡಿದೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.