ಉಲಿವ ಮರದ ಪಕ್ಷಿಯಂತೆ ದೆಸೆದೆಸೆಯನಾಲಿಸುತ್ತಿರ್ದೆ. ಅರಿವರಿಲ್ಲ ಅರಿವರಿಲ್ಲ ಅರಿದು ಮರೆಯಿತ್ತಯ್ಯಾ. ಮಡುವಿನೊಳಗೆ ಬಿದ್ದ ಆಲಿಕಲ್ಲಿನಂತೆ ತನ್ನ ತಾನಿರ್ದನು ಗುಹೇಶ್ವರಯ್ಯನು.