ಊರೊಳಗೆ ಉದಕತುಂಬಿ ಬಾಗಿಲೆಲ್ಲ ಕೆಸರಾದವು ನೋಡಾ. ಮನೆಯೊಳಗೆ ಕಸ ಹೆಚ್ಚಿ ಶಶಿಯ ನೆಳಲೀಯದು ನೋಡಿರೆ. ಊರೊಳಗಣ ಉದಕವ ಹೊರಡಿಸಿ ಬಾಗಿಲೊಳಗಣ ಕೆಸರ ಸುಟ್ಟು ಮನೆಯೊಳಗಣ ಕಸವ ತೆಗೆದು ಶಶಿಯ ಸಲಹಿಕೊಂಬುದ ನೀನೊಲಿದು ಕರುಣಿಸಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.