Pages   (key to Page Status)   


ಊರ ಮುಂದೆ ಶ್ವಾನನ ಕಾಣಬಹುದಲ್ಲದೆ ಸಿಂಹವ ಕಾಣಬಾರದು. ನದಿಯ ಮುಂದೆ ಬಕನ ಕಾಣಬಹುದಲ್ಲದೆ ಹಂಸನ ಕಾಣಬಾರದು. ಪಸರದೊಳಗೆ ಗಾಜಿನ ಮಣಿಯ ಕಾಣಬಹುದಲ್ಲದೆ ರತ್ನವ ಕಾಣಬಾರದು. ಧರೆಯ ಮೇಲೆ ವೇಷಧಾರಿಗಳ ಕಾಣಬಹುದಲ್ಲದೆ (ಶಿವ)ಜ್ಞಾನಿಗಳ ಕಾಣಬಾರದು
ಕೂಡಲಚೆನ್ನಸಂಗಮದೇವಾ.