ಎಂಬತ್ತೆಂಟು ಪವಾಡವ ಮೆರೆದು ಹಗರಣದ ಚೋಹದಂತಾಯಿತೆನ್ನ ಭಕ್ತಿ. ತನುವಿನೊಳಗೆ ಮನ ಸಿಲುಕದೆ ಮನದೊಳಗೆ ತನು ಸಿಲುಕದೆ ತನು ಅಲ್ಲಮನಲ್ಲಿ ಸಿಲುಕಿತ್ತು ಮನ ಚೆನ್ನಬಸವಣ್ಣನಲ್ಲಿ ಸಿಲುಕಿತ್ತು. ನಾನೇತರಲ್ಲಿ ನೆನೆವೆನಯ್ಯಾ ಕೂಡಲಸಂಗಮದೇವಾ