ಎಚ್ಚು ಬಾಲಿಯ ಕೊಂದ ಕಟ್ಟಿದನು ಶರಧಿಯನು ಹತ್ತು ತಲೆಯ ರಾವಳನ ಒಂದೆ ಅಂಬಿನಲ್ಲಿ ಮಡಿಹಿದ ಛಲದಿ ಲಂಕಾದ್ವೀಪವ ನೆಲವಣ್ಣ ಮಾಡಿದ ಕಲಿ ವಿಭೀಷಣಂಗೆ ಪಟ್ಟವ ಕಟ್ಟಿದ ರಾಮನ ತೋರಾ. ಮಾಯದ ಸಂಸಾರವ ನಚ್ಚಿ ಕೆಟ್ಟು ಬರುದೊರೆವೊಗಬೇಡ. ಕರ್ತು ಕೂಡಲಸಂಗಂಗೆ ಶರಣೆನ್ನಿರಯ್ಯಾ.