ಎಡದ ಕೈಯ ಲಿಂಗವ ಬಲದ ಕೈಯಲ್ಲಿ ಮುಟ್ಟಿ ಸ್ಪರ್ಶನವ ಮಾಡುವ ಕರ್ಮಿಯ ನಾನೇನೆಂಬೆ ! ಭವಭವದಲ್ಲಿ ಬಹ ಕರ್ಮಿಯ ನಾನೇನೆಂಬೆ ! ಸತ್ಯವೇನವದಿರ ಮಿಥ್ಯವೇನವದಿರ ಹಿಡಿದ ಕೈ ತಾನೆ ಎಂದರಿಯರಾಗಿ. ಗುಹೇಶ್ವರಲಿಂಗವು ಬೆರಗಾದನು !