ಎಣಿಕೆಗೆ ಬಂದ ಸಯದಾನ ಕ್ಷಣಕ್ಕೆ ಪಾಕವಾಗಲು ಗಣನೆಯಿಲ್ಲದೆ ನೀಡುತ್ತಿರಲು ತೋರದ ಮುನ್ನವೆ ಅರ್ಪಿತವಾದವು. ಇಂತು ಎಣಿಸಿ ನೋಡೆಹೆನೆಂದಡೆ ಮನಕೆ ಸಾಧ್ಯವಲ್ಲ ಬಯಲು ಬಾಯಿದೆಗೆದಂತೆ ಉಣ್ಣುತ್ತಿದ್ದಾನು ಕೂಡಲಸಂಗಮದೇವನು.