ಎನಿಸೆನಿಸೆಂದಡೆ ನಾ ಧೃತಿಗೆಡೆನಯ್ಯಾ. ಎಲುದೋರಿದಡೆ ನರ ಹರಿದಡೆ ಕರುಳು ಕುಪ್ಪಳಿಸಿದಡೆ ನಾ ಧೃತಿಗೆಡೆನಯ್ಯಾ. ಶಿರಹರಿದು ಅಟ್ಟೆ ನೆಲಕ್ಕೆ ಬಿದ್ದಡೆ ನಾಲಗೆ ಕೂಡಲಸಂಗಾ ಶರಣೆನುತ್ತಿದ್ದಿತ್ತಯ್ಯಾ.