ಎನ್ನಂತೆ ಪುಣ್ಯಗೈದವರುಂಟೆ ?


Title vachana saahitya
Author Akka Mahaadevi
Year 1191 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])

ಎನ್ನಂತೆ ಪುಣ್ಯಗೈದವರುಂಟೆ ? ಎನ್ನಂತೆ ಭಾಗ್ಯಂಗೈದವರುಂಟೆ ? ಕಿನ್ನರನಂತಪ್ಪ ಸೋದರರೆನಗೆ? ಏಳೇಳು ಜನ್ಮದಲ್ಲಿ ಶಿವಭಕ್ತರೆ ಬಂಧುಗಳೆನಗೆ. ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾ ಎನಗೆ.