Pages(key to [[Help:Page Status{{!}}Page Status]])
ಎನ್ನೊಡಲೊಳಗೆ ತೋರಿ ತೋರಿ ಅಡಗುವ ನಿಮ್ಮ ಬೆಡಗು ಬಿನ್ನಾಣವ ತಿಳಿಯಬಾರದು. ಭಕ್ತಕಾಯ ಮಮಕಾಯ ಭಕ್ತಪ್ರಾಣ ಮಮಪ್ರಾಣವೆಂಬ ನಿಮ್ಮ ನುಡಿ ಸೂಚಿಸುತ್ತದೆ. ಇದು ಕಾರಣ ಎನ್ನ ತನುವೆಂಬ ಗುಡಿಯೊಳಗೆ ಮನೋಮೂರ್ತಿಲಿಂಗವಾಗಿ ಇನಕೋಟಿ ಪ್ರಭೆಯನೊಳಕೊಂಡು ಹೆರೆಹಿಂಗದೆ ನಿರಂತರ ಬೆಳಗುತ್ತಿರಬೇಕಯ್ಯಾ ನೀವು ಅಖಂಡೇಶ್ವರಾ.