ಎನ್ನ ನೇತ್ರ ಪ್ರಸಾದವಾಯಿತ್ತಯ್ಯಾ. ಎನ್ನ ಶ್ರೋತ್ರ ಪ್ರಸಾದವಾಯಿತ್ತಯ್ಯಾ. ಎನ್ನ ಘ್ರಾಣ ಪ್ರಸಾದವಾಯಿತ್ತಯ್ಯಾ. ಎನ್ನ ಜಿಹ್ವೆ ಪ್ರಸಾದವಾಯಿತ್ತಯ್ಯಾ. ಎನ್ನ ತ್ವಕ್ಕು ಪ್ರಸಾದವಾಯಿತ್ತಯ್ಯಾ. ಎನ್ನ ತನು ಪ್ರಸಾದವಾಯಿತ್ತಯ್ಯಾ. ಎನ್ನ ಮನ ಪ್ರಸಾದವಾಯಿತ್ತಯ್ಯಾ. ಎನ್ನ ಪ್ರಾಣ ಪ್ರಸಾದವಾಯಿತ್ತಯ್ಯಾ. ಎನ್ನ ಭಾವ ಪ್ರಸಾದವಾಯಿತ್ತಯ್ಯಾ. ಎನ್ನ ಜೀವ ಪ್ರಸಾದವಾಯಿತ್ತಯ್ಯಾ. ಎನ್ನ ಸಕಲಕರಣೇಂದ್ರಿಯಂಗಳೆಲ್ಲ ಪ್ರಸಾದವಾಗಿ
ಅಖಂಡೇಶ್ವರಾ
ನಿಮ್ಮ ಮಹಾಪ್ರಸಾದದ ಬೆಳಗಿನೊಳಗೆ ಓಲಾಡುತ್ತಿದ್ದೆನಯ್ಯಾ.