ಎನ್ನ ಕುರುಹಿನ ಕರಕಮಲಮಧ್ಯದಲ್ಲಿ


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಎನ್ನ
ಕರಕಮಲಮಧ್ಯದಲ್ಲಿ
ಪರಮನಿರಂಜನದ
ಕುರುಹ
ತೋರಿದ.

ಕುರುಹಿನ
ಮಧ್ಯದಲ್ಲಿ
ಅರುಹಿನ
ಕಳೆಯ
ತೋರಿದ.

ಕಳೆಯ
ಮಧ್ಯದಲ್ಲಿ
ಮಹಾಜ್ಞಾನದ
ಬೆಳಗ
ತೋರಿದ.

ಬೆಳಗಿನ
ನಿಲವಿನೊಳಗೆ
ಎನ್ನ
ತೋರಿದ.
ಎನ್ನೊಳಗೆ
ತನ್ನ
ತೋರಿದ.
ತನ್ನೊಳಗೆ
ಎನ್ನನಿಂಬಿಟ್ಟುಕೊಂಡ
ಮಹಾಗುರುವಿಂಗೆ
ನಮೋ
ನಮೋ
ಎನುತಿರ್ದೆನಯ್ಯ
ಅಖಂಡೇಶ್ವರಾ.