Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಎನ್ನ ತನುವು ನಿಮ್ಮ ಚರಣವ ಪೂಜಿಸಲೊಲ್ಲದೆ ಹಸಿವು ತೃಷೆ ವಿಷಯದಲ್ಲಿ ಹತವಾಗುತಿರ್ಪುದು ನೋಡಾ! ಎನ್ನ ಮನವು ನಿಮ್ಮ ದಿವ್ಯನಾಮವ ನೆನೆಯಲೊಲ್ಲದೆ ಬಿನುಗು ವಿಷಯಕ್ಕೆ ಹರಿಯುತಿರ್ಪುದು ನೋಡಾ! ಶಿವಶಿವಾ
ಈ ತನುಮನದ ದುರ್ಗುಣದ ವರ್ತನೆಯನೇನೆಂಬೆನಯ್ಯ? ಹಂದಿ ಹಡಿಕೆಯ ನೆನೆಸಿ ಹಾಳಗೇರಿಗೆ ಹೋಗುವಂತೆ ಪ್ರಪಂಚಿನತ್ತ ಓಡಾಡುತಿರ್ಪುವಯ್ಯ ಎನ್ನ ದುರ್ಗುಣಂಗಳು ಅಖಂಡೇಶ್ವರಾ.