ಎನ್ನ ನುಡಿ ಎನಗೆ ನಂಜಾಯಿತ್ತು ಎನ್ನ ಅಲಗೆ ಎನ್ನ ಕೊಂದಿತ್ತು. ಆನು ಪಾಪಿಯಯ್ಯಾ ಆನು ಕೋಪಿಯಯ್ಯಾ. ತರಳತನದಲ್ಲಿ ಕೆಟ್ಟೆನಯ್ಯಾ ಭಕ್ತಿಯ ಹೊಲಬನರಿಯದೆ ಮರುಳಾದೆನಯ್ಯಾ. ಆಳು ಮುನಿದಡೆ ಆಳೇ ಕೆಡುವನು ಆಳ್ದ ಮುನಿದಡೆ ಆಳೇ ಕೆಡುವನು. ನೀವು ಮುನಿದಡೆ ನಾನೇ ಕೆಡುವೆನಯ್ಯಾ ಕೂಡಲಸಂಗಮದೇವಾ.