ಎನ್ನ
ಆಧಾರಚಕ್ರವೆ
ಶ್ರೀಶೈಲಕ್ಷೇತ್ರ
:
ಅಲ್ಲಿರ್ಪ
ಆಚಾರಲಿಂಗವೇ
ಶ್ರೀಮಲ್ಲಿಕಾರ್ಜುನದೇವರು.
ಎನ್ನ
ಸ್ವಾದ್ಥಿಷ್ಠಾನಚಕ್ರವೆ
ಸೇತುಬಂಧಕ್ಷೇತ್ರ;
ಅಲ್ಲಿರ್ಪ
ಗುರುಲಿಂಗವೆ
ರಾಮೇಶ್ವರನು.
ಎನ್ನ
ಮಣಿಪೂರಕ
ಚಕ್ರವೇ
ಪಂಪಾಕ್ಪೇತ್ರ;
ಅಲ್ಲಿರ್ಪ
ಶಿವಲಿಂಗವೆ
ವಿರೂಪಾಕ್ಷೇಶ್ವರನು.
ಎನ್ನ
ಅನಾಹತಚಕ್ರವೇ
ಹಿಮವತ್ಕೇದಾರಕ್ಷೇತ್ರ;
ಅಲ್ಲಿರ್ಪ
ಜಂಗಮಲಿಂಗವೆ
ಹಿಮಗಿರೀಶ್ವರನು.
ಎನ್ನ
ವಿಶುದ್ಧಿಚಕ್ರವೆ
ಅವಿಮುಕ್ತಿಕ್ಷೇತ್ರ:
ಅಲ್ಲಿರ್ಪ
ಪ್ರಸಾದಲಿಂಗವೆ
ವಿಶ್ವೇಶ್ವರನು.
ಎನ್ನ
ಆಜಾÕಚಕ್ರವೆ
ಸಂಗಮಕ್ಷೇತ್ರ:
ಅಲ್ಲಿರ್ಪ
ಮಹಾಲಿಂಗವೆ
ಸಂಗಮೇಶ್ವರನು.
ಇಂತಿವು
ಮೊದಲಾದ
ಸಕಲಕ್ಷೇತ್ರಂಗಳನೊಳಕೊಂಡ
ಎನ್ನ
ಬ್ರಹ್ಮಚಕ್ರವೆ
ಮಹಾಕೈಲಾಸ.
ಅಲ್ಲಿರ್ಪ
ನಿಷ್ಕಲಲಿಂಗವೆ
ಅನಾದಿ
ಪರಶಿವನು
ನೀನೇ
ಅಯ್ಯಾ
ಅಖಂಡೇಶ್ವರಾ.