ಎರಡು ಬೆಟ್ಟದ ನಡುವೆ ಕರಡಿಯ ಮಿಳಿಯ ಮಾಡಿ ಹುಲಿಯನೂ ಎತ್ತನೂ ಹೂಡಿ ಹೊಡೆದವರಾರೊ ? ಎರಡರ ಎಂಟೆರಡರ ಆರರ (ಆರೆಡರ?) ನಾಲ್ಕೆರಡರ ಶರಧಿ ಶರಧಿಯ ಕೂಡಿ ಮೊರೆವುದಿದೇನೊ ? ಕುರುಡ ಹೆಳವನ ಕೈವಿಡಿದು ನಡೆವಂತೆ ಗುಹೇಶ್ವರನೆಂಬ ಲಿಂಗನಿರಾಳದ ನಿಲುವು.