ಎರೆಯಂತೆ ಕರಕರಗಿ, ಮಳಲಂತೆ


Title vachana saahitya
Author Akka Mahaadevi
Year 1191 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])

ಎರೆಯಂತೆ ಕರಕರಗಿ
ಮಳಲಂತೆ ಜರಿಜರಿದು
ಕನಸಿನಲ್ಲಿ ಕಳವಳಿಸಿ
ಆನು ಬೆರಗಾದೆ. ಆವಿಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ ಆಪತ್ತಿಗೆ ಸಖಿಯರನಾರನೂ ಕಾಣೆ. ಅರಸಿ ಕಾಣದ ತನುವ
ಬೆರಸಿ ಕೂಡದ ಸುಖವ
ಎನಗೆ ನೀ ಕರುಣಿಸಾ
ಚೆನ್ನಮಲ್ಲಿಕಾರ್ಜುನಾ.