ಎಲವದ ಮರ ಹೂತು ಫಲವಾದ ತೆರನಂತೆ; ಸಿರಿಯಾದಡೇನು ಶಿವಭಕ್ತಿುಲ್ಲದನ್ನಕ್ಕ ಫಲವಾದಡೇನು ಹೇಳಾ ಹಾವುಮೆಕ್ಕೆಯ ಕಾು ಕುಲವಿಲ್ಲದ ರೂಹು ಎಲ್ಲದ್ದಡೇನು ಬಚ್ಚಲ ನೀರು ತಿಳಿದಲ್ಲಿ ಫಲವೇನು ಅವಗುಣಿಗಳನು ಮೆಚ್ಚ ಕೂಡಲಸಂಗಮದೇವ.