ಎಲ್ಲರೂ ವೀರರು ಎಲ್ಲರೂ ದ್ಥೀರರು ಎಲ್ಲರೂ ಮಹಿಮರು ಎಲ್ಲರೂ ಪ್ರಮಥರು. ಕಾಳಗದ ಮುಖದಲ್ಲಿ ಕಾಣಬಾರದು ಓಡುವ ಮುಖದಲ್ಲಿ ಕಾಣಬಹುದು. ನಮ್ಮ ಕೂಡಲಸಂಗನ ಶರಣರು ದ್ಥೀರರು ಉಳಿದವರೆಲ್ಲರೂ ಅಧೀರರು.