ಏಕಭಾಜನ ಏಕಭಾಜನವೆಂದೆಂಬರು; ನಾವಿದನರಿಯೆವಯ್ಯಾ.


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಏಕಭಾಜನ ಏಕಭಾಜನವೆಂದೆಂಬರು; ನಾವಿದನರಿಯೆವಯ್ಯಾ. ಅಂಗದ ಮೇಲೆ ಪ್ರಾಣಲಿಂಗಪ್ರತಿಷೆ*ಯಾದ ಬಳಿಕ
ಲಿಂಗಕ್ಕೆಯೂ ತನಗೆಯೂ ಏಕಭಾಜನವಲ್ಲದೆ ಭಿನ್ನಭಾಜನವುಂಟೆ ? ಲಿಂಗಕ್ಕೆಯೂ ತನಗೆಯೂ ಏಕಭಾಜನವಾಗದನ್ನಕ್ಕರ ಅಂಗದ ಕಳೆಯಲ್ಲಿ ಲಿಂಗವ ಧರಿಸಿಕೊಳಬಹುದೆ ? ಇದನರಿದು ಏಕಭಾಜನವಾಗದಿರ್ದಡೆ ಅಂತು ದೋಷ. ಅರಿಯದೆ ಏಕಭಾಜನವಾದಡೆ ಇಂತು ದೋಷ. ಈ ಕುಳಸ್ಥಳದ ಭೇದವ ಭೇದಿಸಬಲ್ಲ ಕೂಡಲಚೆನ್ನಸಂಗಾ
ನಿಮ್ಮ ಶರಣ.