ಎಡಿ ಒಯ್ಯನು ಬಾರೆ ದೇವರಿಗೆ

(ಏಡಿ ಒಯ್ಯನು ಬಾರೆ ದೇವರಿಗೆ ಇಂದ ಪುನರ್ನಿರ್ದೇಶಿತ)

ಎಡಿ ಒಯ್ಯನು ಬಾರೆ ದೇವರಿಗೆ ಸಂಪಾದಿಸಿ

  • ಶಿಶುನಾಳ ಶರೀಫರು ಹಿಂದು ಹಾಗು ಮುಸ್ಲಿಮ ಧರ್ಮಗಳಲ್ಲಿ ಸಾಧಿಸಿದ ಸಾಮರಸ್ಯಕ್ಕೆ ಉದಾಹರಣೆ. ಇದು ಅಲ್ಲಾನನ್ನೂ ಕುರಿತು ಕಟ್ಟದ ಪದ್ಯ.

(ಎಡಿ: ಎಡೆ= ದೇವರ ನೈವೇದ್ಯಕ್ಕೆ ಇಡುವ ಆಹಾರ ಪದಾರ್ಥ)

  • ಎಡಿ ಒಯ್ಯನು ಬಾರೆ ದೇವರಿಗೆ

 
ಎಡಿ ಒಯ್ಯನು ಬಾರೆ ದೇವರಿಗೆ
ಎಡಿ ಒಯ್ಯನು ಬಾರೆ ||ಪಲ್ಲ||

ಎಡಿ ಒಯ್ಯನು ಬಾ
ಮಡಿಹುಡಿಯಿಂದಲಿ
ಪೊಡವಿಗಧಿಕ ಎನ್ನ
ಒಡಿಯ ಅಲ್ಲಮನಿಗೆ ||ಅನುಪಲ್ಲ||

ಕರ್ಮದ ಕುರಿ ಕೊಯ್ಸಿ ಅದಕೆ
ಗುರುಮಂತ್ರವ ಜಪಿಸಿ
ಅರುವಿನ ಎಡಿಯನು
ಕರದೊಳು ಪಿಡಿಕೊಂಡು
ಸ್ಥಿರವಾದ ದೇವರು
ಇರುವ ಮಸೀದಿಗೆ ||೧||

ಆದಿ ಅಲ್ಲಮ ಗುರುವು ದೊಡ್ಡ
ಪಾದಗಟ್ಟಿ ಏರು
ದಿಮಿ ದಿಮಿ ಸದ್ಗುರು
ಆದಿ ಶಿಶುನಾಳ
ಸಾಧು ಇರುವ ಬ್ರಹ್ಮ-
ನಾದ ಮಸೀದಿಗೆ ||೨||

ನೋಡಿ ಸಂಪಾದಿಸಿ

ಶರೀಫ ಸಾಹಿತ್ಯ

ಉಲ್ಲೇಖ ಸಂಪಾದಿಸಿ