ಏನೆಂದರಿಯರು ಎಂತೆಂದರಿಯರು ಅರಿವನರಿದೆವೆಂಬರು ಮರಹ ಮರೆದೆವೆಂಬರು. ಒಂದನರಿದೆನೆಂದಡೆ ಮುಖ ಮೂರಾಯಿತ್ತು. ಮೂರು ಮುಖವ ಏಕಾಗ್ರಹಕವ ಮಾಡಿದಲ್ಲದೆ ಶರಣನಲ್ಲ ಗುಹೇಶ್ವರಾ.