ಐಕ್ಯಪದವ ಹಡೆವಡೆ ನಿಕ್ಷೇಪಧಾರಣಿಯಾಗಿರಬೇಕು. ಗುರುವೆಂಬ ಅಂಜನ ಶಿಷ್ಯನೆಂಬ ಪಾಯಾಳು ಲಿಂಗವೆ ಕಡವರ ಆಚಾರವೆ ದಿಗ್ಭಂಧನ `ಭಕ್ತಕಾಯೋ ಮಮಕಾಯ' ಎಂದುದು ಕೂಡಲಚೆನ್ನಸಂಗಯ್ಯನವಚನ.