ಐದು ಸರ್ಪಂಗಳಿಗೆ ತನು ಒಂದು ದಂತವೆರಡು. ಸರ್ಪ ಕಡಿದು ಸತ್ತ ಹೆಣನು ಸುಳಿದಾಡುವುದ ಕಂಡೆ. ಈ ನಿತ್ಯವನರಿಯದಠಾವಿನಲ್ಲಿ ಭಕ್ತಿಯೆಲ್ಲಿಯದೊ ಗುಹೇಶ್ವರಾ ?