ಒಂದೆ ಹೂ ಒಂದೆ ಅಗ್ಘವಣಿ ಒಂದೆ ಓಗರ ಒಂದೆ ಪ್ರಸಾದ ಒಂದೆ ಮನ ಒಂದೆ ಲಿಂಗ. ನಂದಾದೀವಿಗೆ ಕುಂದದ ಬೆಳಗು; ಸ್ವತಂತ್ರ ಪೂಜೆ_ಒಂದೇ. ಅನಾಹತವೆರಡಾಗಿ ಬರುಮುಖರಾಗಿ ಕೆಟ್ಟುಹೋದರು ಗುಹೇಶ್ವರಾ.