ಒಕ್ಕುದ ಪ್ರಸಾದವೆಂದಿಕ್ಕುವಾತನನಾಚಾರಿ; ಕೊಂಬುವಾತ ನೆಟ್ಟನೆ ವ್ರತಗೇಡಿ. ಪ್ರಸಾದವೆಂಬುದು ಹೆಸರಿಲ್ಲದ ಘನವು ! ಪ್ರಸಾದಿಯಾದಾತ ಶೂನ್ಯಶರಣ ಇರವೆ ಲಿಂಗೈಕ್ಯ ಪರವೆ ಪ್ರಸಾದ ! ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಗುರುವೆಂಬ ಓಗರಕ್ಕೆ ಶಿಷ್ಯನೆಂಬ ಪ್ರಸಾದ.