ಒತ್ತಿ ಹೊಸೆದ ಕಿಚ್ಚ ನಾ ಮಾಡಿದೆನೆಂದು ಮುಟ್ಟಿ ಹಿಡಿದಡೆ ಕೈ ಬೇಯದಿಹುದೆ ಎನ್ನಿಂದಾಯಿತ್ತು ಎನ್ನಿಂದಾಯಿತ್ತು ಎನ್ನಿಂದಾಯಿತ್ತು ಎನ್ನದಿರು ಮನವೆ ನಾನು ಮಾಡಿದೆನೆನ್ನದಿರು ಮನವೆ. ಕೂಡಲಸಂಗಮದೇವ ಕೇಳಯ್ಯಾ ಚೆನ್ನಬಸವಣ್ಣನ ಪಾದಕ್ಕೆ ನಮೋ ನಮೋ ಎಂಬೆನು.