ಒಳಗೆಂಬವನೊಬ್ಬ; ಹೊರಗೆಂಬವನೊಬ್ಬ. ರೂಪೆಂಬವನೊಬ್ಬ;


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಒಳಗೆಂಬವನೊಬ್ಬ; ಹೊರಗೆಂಬವನೊಬ್ಬ. ರೂಪೆಂಬವನೊಬ್ಬ; ನಿರೂಪೆಂಬವನೊಬ್ಬ. ಕಾಮಿಯೆಂಬವನೊಬ್ಬ; ನಿಃಕಾಮಿಯೆಂಬವನೊಬ್ಬ. ಮಾಯಿಯೆಂಬವನೊಬ್ಬ; ನಿರ್ಮಾಯಿಯೆಂಬವನೊಬ್ಬ. ಶುದ್ಧನೆಂಬವನೊಬ್ಬ; ಅಶುದ್ಧನೆಂಬವನೊಬ್ಬ. ಮಲಿನನೆಂಬವನೊಬ್ಬ; ನಿರ್ಮಲಿನನೆಂಬವನೊಬ್ಬ. ಒಳಗೆಂಬಾತನು ಅಲ್ಲ; ಹೊರಗೆಂಬಾತನು ಅಲ್ಲ. ರೂಪೆಂಬಾತನು ಅಲ್ಲ; ನಿರೂಪಪೆಂಬಾತನು ಅಲ್ಲ. ಕಾಮಿಯೆಂಬಾತನು ಅಲ್ಲ; ನಿಃಕಾಮಿಯೆಂಬಾತನು ಅಲ್ಲ. ಮಾಯಿ ಎಂಬಾತನೂ ಅಲ್ಲ. ನಿರ್ಮಾಯಿ ಎಂಬಾತನೂ ಅಲ್ಲ ಶುದ್ಧನೆಂಬಾತನು ಅಲ್ಲ; ಅಶುದ್ಧನೆಂಬಾತನು ಅಲ್ಲ. ಮಲಿನನೆಂಬಾತನು ಅಲ್ಲ; ನಿರ್ಮಲಿನನೆಂಬಾತನು ಅಲ್ಲ. ನಾನು ನೀನೆಂಬುದೇನುಯೇನೂ ಇಲ್ಲದ ಪರಾಪರವೇ ಶರಣನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.