Pages   (key to Page Status)   

ಓದಿನ ಹಿರಿಯರು
ವೇದದ ಹಿರಿಯರು
ಶಾಸ್ತ್ರದ ಹಿರಿಯರು
ಪುರಾಣದ ಹಿರಿಯರು
ವೇಷದ ಹಿರಿಯರು
ಭಾಷೆಯ ಹಿರಿಯರು
ಇವರೆಲ್ಲರು ತಮ್ಮ ತಮ್ಮನೆ ಮೆರೆದರಲ್ಲದೆ ನಿಮ್ಮ ಮೆರೆದುದಿಲ್ಲ. ತಮ್ಮ ಮರೆದು ನಿಮ್ಮ ಮೆರೆದಡೆ ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವರು.