ಓಲೆಯನಿಕ್ಕಿದ ಬಾಲೆಯ ಓಲೆಗಳೆಯದಿದೆಂತೊ ? ಓಲೆಯಿದ್ದು [ಓಲೆ]ಗಾಯತವಾಯಿತ್ತೆಲ್ಲರಿಗೆಯೂ ಓಲೆಯೂ ಹೋಯಿತ್ತೆನಗೆ ಬಾಲೆಯೂ ಹೋಯಿತ್ತೆನಗೆ ಓಲೆಯ ಬಾಲೆಯ ಕೀಲಬಲ್ಲವರ ಕೂಡಲಚೆನ್ನಸಂಗನೆಂಬೆನು.