ಕಂಕುಳೆಂಬುದು ಕವುಚಿನ ತವರುಮನೆ. ಕರಸ್ಥಲವೆಂಬುದು [ಕೈ] ಕೆಟ್ಟ ಹುಣ್ಣು. ಅಮಳೋಕ್ಯವೆಂಬುದು ಬಾಯ ಭಗಂದರ (ಬಗದಳ ?). ಅಂಗಸೋಂಕೆಂಬುದು ಪಾಪದ ತವರುಮನೆ. ಉತ್ತಮಾಂಗವೆಂಬುದು ನೆತ್ತಿಯ ಮೃತ್ಯು. ಕÀಂಠವೆಂಬುದು ಗಂಟಲ ಗಾಣ. ಮತ್ತೆ ಗುಹೇಶ್ವರನ ಮಾತು ನಿಮಗೇಕೆಲವೊ ?