ಕಂಗಳೊಳಗೆ ತೊಳಗಿ ಬೆಳಗುವ ದಿವ್ಯ ರೂಪವ ಕಂಡು ಮೈಮರೆದೆನವ್ವಾ. ಮಣಿಮುಕುಟದ ಫಣಿಕಂಕಣದ ನಗೆಮೊಗದ ಸುಲಿಪಲ್ಲ ಸೊಬಗನ ಕಂಡು ಮನಸೋತೆನವ್ವಾ. ಇಂತಾಗಿ ಚೆನ್ನಮಲ್ಲಿಕಾರ್ಜುನನೆನ್ನ ಮದುವಣಿಗ ಆನು ಮದುವಣಿಗಿ ಕೇಳಾ ತಾಯೆ.