ಕಂಡೆನೆಂಬುದು ಕಂಗಳ ಮರವೆ ಕಾಣೆನೆಂಬುದು ಮನದ ಮರವೆ ಕೂಡಿದೆನೆಂಬುದು ಅರುಹಿನ ಮರವೆ ಅಗಲಿದೆನೆಂಬುದು ಮರಹಿನ ಮರವೆ. ಇಂತು_ಕಂಡೆ ಕಾಣೆ ಕೂಡಿದೆ ಅಗಲಿದೆ ಎಂಬ ಭ್ರಾಂತಿಸೂತಕವಳಿದು ನೋಡಲು ಗುಹೇಶ್ವರಲಿಂಗವನಗಲಲೆಡೆಯಿಲ್ಲ ಕೇಳಾ ಎಲೆ ತಾಯೆ