ಕಂಥೆಯೊಳಗಣ ಕಪಟವ ಹರಿದಲ್ಲದೆ ಕಾಯ[ನಿರ್ವಂಚಕ]ನಲ್ಲ. ಕಪ್ಪರದೊಳಗಣ ಆಪ್ಯಾಯನವ ಹರಿದಲ್ಲದೆ ಜೀವ[ನಿರ್ಭಾವಕ]ನಲ್ಲ. ಕಣ್ಣಿನೊಳಗಣ ಕಾಳಿಕೆ ಹಿಂಗಿದಲ್ಲದೆ ಜ್ಞಾನಾನುಭಾವಿಯಲ್ಲ. ಕಾಯದೊಳಗಣ ಕಟ್ಟಿಗೆ ಮುರಿದು
ಮಾಯದೊಳಗಣ ಕಂಥೆಯ ಹರಿದು
ಮನದೊಳಗಣ ಕಪ್ಪರವನೊಡೆದು
ಸುಳಿದಾಡುವ ಕಣ್ಣ ಕಿತ್ತು
ನಿಶ್ಚಯ ನಿಜದಲ್ಲಿ ಚರಿಸುವ ಜ್ಞಾನಜಂಗಮಕ್ಕೆ `ನಮೋ ನಮೋ' ಎಂಬೆ ಕೂಡಲಚೆನ್ನಸಂಗಮದೇವಾ