ಕಟ್ಟರಸನ ಬಂದು ಕಳ್ಳರು ಮುತ್ತಲು ಪಟ್ಟಣ ಬೆದರಿತ್ತು ನೋಡಾ. ಪಟ್ಟಣದ ತಳವಾರರು ದುಷ್ಟರನೆಬ್ಬಟ್ಟಲು ಬೆದರಿಕೆ ಬಿಟ್ಟೋಡಿತ್ತು ನೋಡಾ. ಕಾಯಪಟ್ಟಣದ ಕಳವಳಡಗಿತ್ತು. ಇದನೇನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.