ಕಟ್ಟಿ ಬಿಡುವನೆ ಶರಣನು ಬಿಟ್ಟು ಹಿಡಿವನೆ ಶರಣನು ನಡೆದು ತಪ್ಪುವನೆ ಶರಣನು ನುಡಿದು ಹುಸಿವನೆ ಶರಣರನು ಸಜ್ಜನಿಕೆ ತಪ್ಪಿದಡೆ ಕೂಡಲಸಂಗಯ್ಯ ಮೂಗ ಹಲುದೋರೆ ಕೊಯ್ವ.