ಕಬ್ಬಿನ ಮೇಲೆ ಜೇನಿಟ್ಟಿತ್ತೆಂಬರು ಅವು ಒಂದರ ಸಿಹಿಯನೊಂದರಿಯವು. ಭಕ್ತ ಜಂಗಮದ ನಡುವೆ ಅರ್ಥಪ್ರಾಣ ಅಬ್ಥಿಮಾನವೆಂಬ ಸಿಗುರು ಕಾಡಿತ್ತು ಕಾಣಾ ಕೂಡಲಸಂಗಮದೇವಾ.