ಕರಿಯ ಕರದಲ್ಲಿ ಅರಿಯಾರು ಹುಟ್ಟಿ ಸಿರಿದೇವಿಯ ಸೇವಿಸಿ ಮತಿವಂತರ ಮರುಳು ಮಾಡಿ ಗತಿ ಸತ್ಪಥಕೆ ವೈರಿಗಳಾದವು ನೋಡಾ. ಕರಿಯ ಕರವ ಮುರಿದು ಹರಿಯ ಮುಖದಲ್ಲಿ ಹಾಲು ಕುಡಿಯಬಲ್ಲರೆ ಸಿರಿದೇವಿ ಮಡಿದಳು. ಅರಿಗಳಾರು ನಮಗಾಧಾರವಿಲ್ಲೆನುತ ತೆಗೆದೋಡಿದುದ ಕಂಡೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.